ಸ್ಲೇಟಲ್ವಾ ಇದು!… : heggaddesamachar.com

ಸಂದೀಪ್ ಶೆಟ್ಟಿ ಹೆಗ್ಗದ್ದೆ ( ಕಚಗುಳಿ ಅಂಕಣ ಬರಹ) ಸ್ಲೇಟಲ್ವಾ ಇದು!… …ಇಲ್ಲ ಇವತ್ ಪಕ್ಕಾ ಒದೆ ಬಿದ್ದೆ ಬೀಳುತ್ತೆ… …ಅಯ್ಯೋ ಅಮ್ಮ ಬ್ಯಾಗ್ ಓಪನ್ ಮಾಡಿ ನೋಡ್ತಿದ್ದಾಳೆ..! ..,ಓಪನ್ ಮಾಡೇ ಬಿಟ್ಲು, ಅಯ್ಯೋ ಕೈಗೆ ಸಿಕ್ತು..! ಅರೇ ಏನೂ ಆಗಿಲ್ವಲ್ಲಾ..! ನಿನ್ನೆ ಕೈ ಜಾರಿ ಬಿದ್ದಾಗ ಮಧ್ಯೆ ಒಡೆದಿತ್ತಲ್ಲಾ! ಬಹುಶಃ ದೇವರೇ ಬಂದು ಸರಿ ಮಾಡಿರಬೇಕು, ಇಲ್ಲಾ ಬಿದ್ದಿದ್ದು ನನ್ನ ಬ್ರಮೆ ಇರಬಹುದು. ಸ್ಲೇಟ್ ಸರಿ ಹೋಗಿದ್ಯಲ್ಲಾ!!, ಯಾವ ಒಡೆದ ಮಾರ್ಕು ಇಲ್ವಲ್ಲಾ..! ಥ್ಯಾಂಕ್ಸ್ ಗಾಡ್!!, […]

ಇಂದು ತುಲಾ‌ಸಂಕ್ರಮಣ … ತಲಕಾವೇರಿಯಲ್ಲಿ ‌ತೀರ್ಥೋದ್ಭವ : heggaddesamachar

ಅಂಕಣ ಬರಹ: ಲತಾ ಸಂತೋಷ್ ಶೆಟ್ಟಿ ಮುದ್ದುಮನೆ ದಟ್ಟ ಹಸಿರಿನ ಗಿರಿಕಂದರಗಳ‌ ನಡುವೆ ನಿಸರ್ಗ ದೇವತೆ ಧರೆಗಿಳಿದಂತೆ ಕಂಗೊಳಿಸುವ ಪ್ರಾಕೃತಿಕ ನೈಸರ್ಗಿಕ ತಾಣ ಕರ್ನಾಟಕದ ಒಂದು ಸುಂದರ ಜಿಲ್ಲೆ ಕೊಡಗು. ನಿತ್ಯ ಹರಿದ್ವರ್ಣದ ದಟ್ಟ ಕಾಡುಗಳ ಹಸಿರಿನ ಮಡಿಲು, ಬೆಟ್ಟಗುಡ್ಡಗಳ ಸೊಬಗು, ತುಂಬಿ ತುಳುಕುವ ಸಸ್ಯ ಸಂಪತ್ತು, ವನ್ಯರಾಶಿಗಳು, ಕಾಫಿ ತೋಟದ ಕಂಪು, ಕಿತ್ತಳೆ ಏಲಕ್ಕಿ ತೋಟಗಳ ನಡುವೆ ಹರಿವ ಹಳ್ಳ ಕೊಳ್ಳ ಧುಮುಕಿ ಹರಿವ ಜಲಪಾತಗಳು ಝಳುಝಳು ಹರಿವ ನದಿ ತೊರೆಗಳು ಹಾಗೂ ಪಚ್ಚೆಪೈರಿನಿಂದ ಆವೃತ್ತವಾದ […]

ಮರೆಯಾದ‌ ಡೋಲು… ಮರೆಯಲಾಗದ ಡೋಲನಾದ…: heggaddesamachar

ಅಂಕಣ ಬರಹ: ಲತಾ ಸಂತೋಷ್ ಶೆಟ್ಟಿ ಮುದ್ದುಮನೆ ಆಧುನಿಕತೆಯ ಭರಾಟೆಯಲ್ಲಿ ಬಹುತೇಕ ಪುರಾತನ ಸಂಸ್ಕೃತಿಗೆ ಫಾಸಿಯಾಗಿರುವುದರೊಂದಿಗೆ ಡೋಲು, ಕೊಳಲು ಮುಂತಾದ ಸಾಂಪ್ರದಾಯಿಕ ಸಂಗೀತ ಪರಿಕರಗಳು ಕಾಣೆಯಾಗುತ್ತಿರುವುದು ನೋವಿನ ವಿಷಯ. ಜಾಗತೀಕರಣದ ನೆಪದಲ್ಲಿ ಜಾನಪದೀಯ ಮೌಲ್ಯಗಳು‌ ಗೌಣವಾಗುತ್ತಿದೆ. ಒಂದು ಕಾಲದಲ್ಲಿ ಜನಪದ ಸಂಗೀತ ಪರಿಕಗಳಿಗೆ ಅಗ್ರಸ್ಥಾನ ವಿದ್ದು ಅವುಗಳ ಹಿಂದೆ ಒಂದು ಜನಾಂಗದ ಸಂಸ್ಕೃತಿಯ ಪರಿಚಯ ಹಾಗೂ ಆರೋಗ್ಯದಾಯಕ ಸಂದೇಶ ದೊಂದಿಗೆ ಗ್ರಾಮೀಣ ಸೊಡಗು ಹಾಗೂ ಜೀವನ ಪದ್ಧತಿಗೆ ಪೂರಕವಾಗಿದ್ದವು. ಊರಿನ ಜಾತ್ರೆ, ಭೂತಾರಾಧನೆ ಹಾಗೂ ಸಂಸ್ಕೃತಿ ವಿಚಾರಗಳಲ್ಲಿ […]

ಹೆಸರುಗಳ ಕುತೂಹಲ : heggaddesamachar

ಅಂಕಣ ಬರಹ: ಲತಾ ಸಂತೋಷ್ ಶೆಟ್ಟಿ ಮುದ್ದುಮನೆ ಪ್ರತಿಯೊಬ್ಬ ವ್ಯಕ್ತಿಯ ಪ್ರಮುಖ ಹಾಗೂ ಪ್ರಧಾನವಾದ ಗುರುತು ಹೆಸರು. ಮನುಷ್ಯ ಭಾಷೆಯನ್ನು ಕಲಿತಂದಿನಿಂದ ತನ್ನ ದೈನಂದಿನ ಬದುಕಿಗೆ ಉಪಯುಕ್ತವೆನಿಸಿದ ಎಲ್ಲ ವಸ್ತುಗಳಿಗೂ ಹೆಸರಿಡಲು ಆರಂಭಿಸಿದ. ಲೌಕಿಕ ವ್ಯವಹಾರದ ದೃಷ್ಟಿಯಿಂದ ಮಾನವನಿಗಂತೂ ಒಂದು ಹೆಸರು ತೀರ ಅನಿವಾರ್ಯ. ಹುಟ್ಟಿದ ಪ್ರತಿಯೊಂದು ಮಗುವಿಗೂ ಒಂದೊಂದು ಹೆಸರಿಡುವ ಪದ್ಧತಿ ರೂಢಿಯಲ್ಲಿದೆ. ಅಷ್ಟೆ ಅಲ್ಲದೆ ನಾಮಕರಣವನ್ನು ಷೋಡಶ ಸಂಸ್ಕಾರಗಳ ಪಟ್ಟಿಯಲ್ಲಿ ಸೇರಿಸಿದ್ದಾರೆ. ನಾಮಕರಣದ ಮಹತ್ವದ ಕುರಿತು ಶಾಸ್ತ್ರಗ್ರಂಥವೊಂದರಲ್ಲಿ “ಹೆಸರು ಎಲ್ಲಾ ವ್ಯವಹಾರಗಳಿಗೂ ತೀರ ಅಗತ್ಯ. […]

ಬಿದಿರಿಗಿಲ್ಲ ಇನ್ನೂ ಕಾನೂನು ಬಂಧನ : heggaddesamachar

ಅಂಕಣ ಬರಹ: ಲತಾ ಸಂತೋಷ್ ಶೆಟ್ಟಿ ಮುದ್ದುಮನೆ ವನಸಿರಿಯ ನಾಡು, ವೈವಿಧ್ಯಮಯ ಸಸ್ಯಸಂಕುಲಗಳ ಬೀಡು ಎಂಬ ಹೆಗ್ಗಳಿಕೆಯ ನಾಡು ಕರ್ನಾಟಕ. ಇಂತಹ ವಿಫುಲ ಸಸ್ಯಸಿರಿಯ ನಾಡಿನಲ್ಲಿ ಸಸ್ಯಗಳ ಪರಿಚಯ ಮಾನವನ ಚರಿತ್ರೆಯಷ್ಟೇ ಪುರಾತನವಾದುದು. ಆದರೆ ಇಂದು ಬಳಕೆಯಲ್ಲಿದ್ದ ಅನೇಕ ಸಸ್ಯಗಳ ಬಗೆಗಿನ ದಾಖಲೆಗಳು ದುರ್ಲಭವಾಗಿದೆ. ವೈವಿಧ್ಯಮಯ ಹವಾಗುಣ ಹೊಂದಿರುವ ಕರ್ನಾಟಕದಲ್ಲಿ ಬಿದಿರು ಬೆಳೆಸಿ ಅವುಗಳನ್ನು ಸಂರಕ್ಷಿಸುವ ಅಗತ್ಯವಿದೆ. ಬಿದಿರು ಬೆಳೆಯ ಅಭಿವೃದ್ಧಿಗೆ ಸರಕಾರ, ಅರಣ್ಯ ಇಲಾಖೆ, ಸಸ್ಯಶಾಸ್ತ್ರ ವಿಭಾಗ ಜಾಗೃತರಾಗಿ ಬಿದಿರಿನ ಬೆಳೆ ಬೆಳೆಯಲು ಬೇಕಾದ ಸಲಹೆ […]

ವಿಷ್ಣುವರ್ಧನ್ ಹುಟ್ಟುಹಬ್ಬಕ್ಕೆ ಡಿಫರೆಂಟ್ ಆಗಿ ವಿಶ್ ಮಾಡಿ, ‘ದಾದಾ’ನ ಸವಿ ನೆನಪು ಹಂಚಿಕೊಂಡ ನಟ ಸಂಚಾರಿ ವಿಜಯ್ – ಏನದು ಇಲ್ಲಿದೆ ಓದಿ: heggaddesamachar

ಚಿಕ್ಕ ವಯಸ್ಸಿನಲ್ಲಿ “ದಾದಾ” ಪೋಸ್ಟರನ್ನು ಮೊದಲು ಪೆನ್ನಿನಲ್ಲಿ ತಿದ್ದಿ ಹೇಗೆ ಬರೆಯುತ್ತಿದ್ದೆನೋ ಹಾಗೆಯೇ ಮತ್ತೆ ಬರೆಯುವ ಪ್ರಯತ್ನ ಮಾಡಿದ್ದೇನೆ. ವಿಷ್ಣು ಸರ್ ಬದುಕಿದ್ದಾಗ ಒಮ್ಮೆಯೂ ಅವರನ್ನೂ ಹತ್ತಿರದಿಂದ ನೋಡಿ ಮಾತನಾಡಿಸುವ ಅವಕಾಶ ಒದಗಿಬರಲಿಲ್ಲ ಆದರೆ ಅವರು ಕಾಲವಾದ ಮಾರನೆಯ ದಿನ ಕೊನೆಯ ಅವಕಾಶ ಸಿಕ್ಕಿದ್ದು ‘national college ground’ನಲ್ಲಿ, ಅಲ್ಲಿಯೂ ಆ ಜನ ಜಂಗುಳಿಯಲ್ಲಿ ಪೊಲೀಸರಿಂದ ಲಾಠಿ ಏಟು ತಿಂದು ಹರಿದ ಚಪ್ಪಲಿ ಎಳೆದಾಡಿಕೊಂಡು ಸಿಕ್ಕ ಅವಕಾಶದಲ್ಲೇ ಅಂತಿಮ ದರ್ಶನ ಮಾಡಿ ಸಮಾಧಾನ ಮಾಡಿಕೊಂಡಿದ್ದಾಯ್ತು. ಭೇಟಿಯಾಗಲು ಒಮ್ಮೆಯೂ […]